ನನ್ನಲ್ಲಿರುವ ರಾಷ್ಟ್ರಭಕ್ತಿಗೆ ಚಕ್ರವರ್ತಿ ಸೂಲಿಬೆಲೆ ಅವರೇ ಅಡಿಪಾಯ. ನಂನ್ನತೆಯೇ ಅದೆಷ್ಟೋ ಯುವಕರಿಗೆ ಈ ಮಾತು ಅನ್ವಯಿಸುತ್ತದೆ.
ಹೀಗೆ ಒಂದು ದಿನ,ನಮ್ಮ ಊರಿನಲ್ಲಿರುವ ಲೈಬ್ರರಿಗೆ ಹೋಗಿದ್ದೆ. ಅಲ್ಲಿ ಸ್ವಾಮೀ ವಿವೇಕಾನಂದರ ಬಗೆಗೆ ಹಲವಾರು ಪುಸ್ತಕಗಳಿದ್ದವು. ನನಗೆ ತಿಳಿಯದಂತೆ ಸ್ವಾಮೀ ವಿವೇಕಾನಂದರ ಮೇಲೆ ಒಂದು ರೀತಿಯ ಆಕರ್ಷಣೆ ಮೂಡಿತ್ತು. ಅಂತೆಯೇ ಯೌಟ್ಯೂಬ್ ನಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ವಿವೇಕಾನಂದರ ಬಗೆಗಿನ ಹಲವಾರು ವಿಡಿಯೋಗಳನ್ನು ನೋಡಿದೆ. ನನಗೆ ಹಲವಾರು ವಿಷಯಗಳು,ವ್ಯಕ್ತಿಗಳು ಪರಿಚಿತವಾಗಿದ್ದೇ ಆಗ. ಆದರೆ ಇತ್ತೀಚಿಗೆ ಕೆಲವು ಗುಲಾಮರ ಟ್ರೋಲ್ ಪೇಜ್ಗಳು ಚಕ್ರವರ್ತಿಯವರನ್ನು pung-ಲೀ ಎಂದು ನಾಲಗೆ ಹರಿಯುತ್ತಿದ್ದಾರೆ., ಅವರು ಹೇಳುವುದೆಲ್ಲ ಸುಳ್ಳು ಎಂಬಂತೆ ಬಿಂಬಿಸುತ್ತಿದ್ದಾರೆ(ಮೂರ್ಖರು)., ಅವರಿಗೆ ನನ್ನ ಉತ್ತರವೇನೆಂದರೆ-
ನನಗೆ ವಿವೇಕಾನಂದರ ಪುಸ್ತಕಗಳಲ್ಲಿ ಅರ್ಥವಾಗದ ಅದೆಷ್ಟೋ ಪದಗಳು, ಸಾಲುಗಳನ್ನು ಸರಳವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದ್ದು ನಮ್ಮ ಚಕ್ರವರ್ತಿ ಸೂಲಿಬೆಲೆ ಅಣ್ಣ. ನಮ್ಮಂತಹ ಅದೆಷ್ಟೋ ಯುವ ಮನಸ್ಸು,ಹೃದಯಗಳಲ್ಲಿ ವಿವೇಕಾನಂದರ ಮಾತಿನ ಮಿಂಚಿನ ಸಂಚಾರವನ್ನು ಮಾಡಿದವರು ನಮ್ಮ ಚಕ್ರವರ್ತಿ ಸೂಲಿಬೆಲೆ ಅಣ್ಣ. ಇಲ್ಲದಿದ್ದರೆ ಬರೀ ಸಿನೆಮಾ,ಕ್ರಿಕೆಟ್ಗಳಿಂದ ತುಂಬಿದ ಮನಸ್ಸುಗಳು ಹೇಗೆ ಬದಲಾಗಬೇಕು. ಸ್ವಾಮೀ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಾತ ಶಾರದಾ ದೇವಿ,ಸೋಧರಿ ನಿವೇದಿತಾ ಇವರೆಲ್ಲರ ಬಗ್ಗೆ ಅಗಾಧವಾದ ಅರಿವು,ಗೌರವ ಬೆಳೆಯುವಂತೆ ಮಾಡಿ ಸಮಗ್ರವಾಗಿ ಯುವ ಜನತೆಯ ವ್ಯಕ್ತಿತ್ವ ವಿಕಾಸಕ್ಕೆ ಕಾರಣಪಾತ್ರರು ನಮ್ಮ ಚಕ್ರವರ್ತಿ ಸೂಲಿಬೆಲೆ ಅಣ್ಣ.
ಸೈನ್ಯದ ಬಗ್ಗೆ ಮಾಧ್ಯಮಗಳು ಹೇಳುತ್ತಿದ್ದ ಗುಂಡಿನ ಚಕಮಕಿ, ಯುದ್ಧ ಭೀತಿ ಬಿಟ್ಟರೆ ಬೇರೆ ಏನೂ ತಿಳಿದಿರದ ನನ್ನಂತಹ ಅದೆಷ್ಟೋ ಜನರಿಗೆ ಕಾರ್ಗಿಲ್ ಯುದ್ಧದ ವಿಜಯೋತ್ಸಾಹದ ವೀರಗಾತೆ ಹಾಡಿ ಸೈನ್ಯದ ಬಗ್ಗೆ ಹೆಮ್ಮೆ,ಗರ್ವ ಮೂಡುವಂತೆ ಮಾಡಿದವರು ನಮ್ಮದೇಶ ಭಾರತ ಎಂದು ಎದೆಯುಬ್ಬಿಸಿ ಹೇಳುವಂತೆ ಮಾಡಿದವರು ನಮ್ಮ ಚಕ್ರವರ್ತಿ ಸೂಲಿಬೆಲೆ ಅಣ್ಣ.
ರಾಜಕೀಯ ಪಕ್ಷಗಳೆಲ್ಲ ಒಂದೇ, ಎಲ್ಲರೂ ಒಂದೇ ,ಈ ದೇಶವೇ ಹೀಗೆ, ನಾವು ಭಾರತದಲ್ಲಿ ಇರುವುದು ನಮ್ಮ ಕರ್ಮ ಎಂಬ ಭಾವನೆಯನ್ನು ಬದಲಾಯಿಸಿ ತಮ್ಮ ಸ್ವಂತ ಪರಿಶ್ರಮ, ಸಂಘಟನಾ ಶಕ್ತಿ,ವಾಕ್ಚಾತುರ್ಯಗಳಿಂದ ಗುಜರಾತಿನ ಸನ್ಯಾಸಿ ಮೋದಿ ಅವರ ಬಗ್ಗೆ, ಅವರ ಸಾಧನೆಯ ಬಗ್ಗೆ ಜನರಿಗೆ ಅರ್ಥವಾಗುವಂತೆ, UPA ಪಕ್ಷಗಳ ಹಗರಣಗಳನ್ನು ಯಾವ ಮಾದ್ಯಮಕ್ಕೂ ಕಡಿಮೆ ಇಲ್ಲವೆಂಬಂತೆ ಸ್ಪಷ್ಟವಾಗಿ ಜನರಿಗೆ ಅರ್ಥವಾಗುವಂತೆ ವಿವರಿಸಿ "ನಮೋ ಭಾರತ್" ಎಂಬ ಕಾರ್ಯಕ್ರಮದ ಮೂಲಕ 2014&2019 ಎರಡೂ ಬಾರಿಯೂ ಕರ್ನಾಟಕದಲ್ಲಿ ಬಿಜೆಪಿಯ ಗೆಲುವಿಗೆ ಪ್ರಮುಖ ಕಾರಣವಾದವರು, ರಾಜಕೀಯ ವಿಷಯಗಳ ಸಂಕ್ಷಿಪ್ತ ವಿಶ್ಲೇಷಣೆ ಮೂಲಕ ನಮ್ಮೆಲರಿಗೂ ತಿಳಿವಳಿಕೆ ನೀಡಿದವರು,ಮಾರ್ಗದರ್ಶನ ಮಾಡಿದವರು, ಹೀಗೆ ಹಲವಾರು ರಾಜಕೀಯ ವ್ಯಕ್ತಿ ಮತ್ತು ಪಕ್ಷಗಳ ನಿಜವಾದ ರೂಪ ನಮ್ಮ ಮುಂದಿಟ್ಟವರು ನಮ್ಮ ಚಕ್ರವರ್ತಿ ಸೂಲಿಬೆಲೆ ಅಣ್ಣ.
ಯುವ ಬ್ರಿಗೇಡ್ ಎಂಬ ಯುವಕರ ಸಂಘಟನೆ ಕಟ್ಟಿಕೊಂಡು ಯಾವ ಫಲಾಪೇಕ್ಷೆ ಇಲ್ಲದೆ ಯಾವ ಪ್ರಚಾರವೂ ಇಲ್ಲದೇ ನಿಸ್ವಾರ್ಥವಾಗಿ ಹಲವಾರು ಗ್ರಾಮ ಸ್ವಚ್ಛತೆ, ಕೆರೆ ಹೂಳೆತ್ತುವುದು,ಕಲ್ಯಾಣಿ ನವೀಕರಣ ಇಂತಹ ಹಲವಾರು ಕೆಲಸಗಳನ್ನು ಮಾಡಿ ಆದರ್ಶ ವ್ಯಕ್ತಿಯಾಗಿ ನಮ್ಮೆಲ್ಲರ ಪ್ರೀತಿಗೆ ಗೌರವಕ್ಕೆ ಪಾತ್ರರಾಗಿರುವವರು ಎಷ್ಟೋ ಕಾಲೇಜು ವಿದ್ಯಾರ್ಥಿಗಳಿಗೆ ಜೀವನ ಪಯಣದಲ್ಲಿ ನಂಬಿಕೆ, ಆತ್ಮಸ್ಥೈರ್ಯ ಮೂಡಿಸಿ ಧೈರ್ಯ ತುಂಬಿದವರು ನಮ್ಮ ಚಕ್ರವರ್ತಿ ಸೂಲಿಬೆಲೆ ಅಣ್ಣ.
ವ್ಯಕ್ತಿತ್ವ, ದೇಶ, ಧರ್ಮ, ಕರ್ಮ ಹೀಗೆ ಹಲವು ವಿಷಯಗಳಲ್ಲಿ ನನ್ನಂತಹ ಹಲವಾರು ಯುವಕರಿಗೆ ದಾರಿ ದೀಪವಾಗಿ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರನ್ನು, ನಮ್ಮಂತಹ ಅವರ ಅನುಯಾಯಿಗಳನ್ನು ಯಾವ ಟ್ರೋಲ್ ಕೂಡ ಯಾವತ್ತೂ ವಿಚಲಿತಗೊಳಿಸದು.ಯಾರೋ ಬುದ್ಧಿಗೇಡಿಗಳು ಮಾಡಲು ಕೆಲಸವಿಲ್ಲದೆ ಇಂತಹ ನೀಚ ಟ್ರೋಲ್ ಮಾಡುತ್ತಾರೆ.,
ಆದರೆ ಇಂತಹ ಟ್ರೋಲ್ ಆಗಲಿ ಮತ್ತೊಂದಾಗಲಿ ನನ್ನಂತಹ ಯುವಕರ ಚಕ್ರವರ್ತಿಯವರ ಮೇಲಿನ ನಿಷ್ಠೆ ಎಂದು ಕೂಡ ಒಂದು ಸಾಸಿವೆ ಕಾಳಿನಷ್ಟು ಬದಲಾಗದು.
ಚಕ್ರವರ್ತಿ ಸೂಲಿಬೆಲೆಯವರು ಬರೀ ತಮ್ಮ ಸ್ವಂತ ಜೀವನಕ್ಕಾಗಿ ದುಡಿಯದೇ ಕರ್ನಾಟಕದ ಪ್ರತಿಯೊಬ್ಬ ಯುವಕರಿಗಾಗಿ ಹಾಗೂ ಮುಂದಿನ ಪೀಳಿಗೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಬರಿಯ ಸ್ವಾರ್ಥದ ಯೋಚನೆ ಮಾಡುವ ಗುಲಾಮರಿಗೆ ಇದೆಲ್ಲ ಎಲ್ಲಿ ಅರ್ಥವಾಗಬೇಕು????
ಜೈ ಹಿಂದ್
ಜೈ ಶ್ರೀ ಕೃಷ್ಣ.
No comments:
Post a Comment